ಮಾವುಗಳಿಗೆ ಕ್ಯಾಲ್ಸಿಯಂ ಕಾರ್ಬೈಡ್, ಪಾಸ್ಪರ್ಸ ಹೈಡ್ರೈಡ್ ಈ ರೀತಿಯ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ, ಇಂಥ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಒಳಿತಾಗುವ ಬದಲು ಹಾನಿಯಾಗುವುದೇ ಹೆಚ್ಚು. ಇವುಗಳನ್ನು ತಿನ್ನುವುದರಿಂದ ತಲೆಸುತ್ತು, ಹೊಟ್ಟೆ ಹಾಳಾಗುವುದು, ಕ್ಯಾನ್ಸರ್‌ನಂಥ ಮಾರಕ ರೋಗಗಳೂ ಬರುತ್ತವೆ. ನೀವು ತಂದ ಮಾವಿನ ಹಣ್ಣುಗಳಲ್ಲಿ ರಾಸಾಯನಿಕ ಸಿಂಪಡಿಸಿದೆಯೇ ಎಂದು ಪತ್ತೆ ಹಚ್ಚುವುದು ಹೇಗೆ? ಎಂಬುದನ್ನು ತಿಳಿಯಿರಿ.